ಕಾಲಾಹಂಡಿ  

  ಭಾರತದ ಒರಿಸ್ಸ ರಾಜ್ಯದ ಒಂದು ಜಿಲ್ಲೆ. ಹಳೆಯ ಸಂಬಲ್‍ಪುರ್ ಜಿಲ್ಲೆಯ ನವಪಾರ ಉಪ ವಿಭಾಗವನ್ನು ಆಗಿನ ಕಾಲಾಹಂಡಿ ಸಂಸ್ಧಾನಕ್ಕೆ ಸೇರಿಸಿ ಈ ಜಿಲ್ಲೆಯನ್ನು 1949ರಲ್ಲಿ ರಚಿಸಲಾಯಿತು. ವಿಸ್ತೀರ್ಣ 5,099 ಚ.ಮೈ. ಜನಸಂಖ್ಯೆ 10,09,654 (1961).

 ಕಾಲಾಹಂಡಿ ಜಿಲ್ಲೆಯಿಡೀ ಸಾಮಾನ್ಯವಾಗಿ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಪಶ್ಚಿಮದಲ್ಲಿ ಭವಾನಿ ಪಟ್ಟಣದಿಂದ ಜುನಗಡದ ವರೆಗೂ ಅಲ್ಲಿಂದ ದಕ್ಷಿಣಕ್ಕೆ ಕೊರಾಪುಟ್ ಜಿಲ್ಲೆಯ ಗಡಿಯವರೆಗೂ ಇರುವ ನೆಲ ಫಲವತ್ತಾದ ಮೈದಾನ. ಗೋದಾವರಿಯ ಉಪನದಿಯಾದ ಇಂದ್ರಾವತಿ, ಮಹಾನದಿಯ ಉಪನದಿಯಾದ ತೆಲ್

_ಇವು ಈ ಜಿಲ್ಲೆಯಲ್ಲಿ ಹರಿಯುತ್ತವೆ. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿದೆ. ಬತ್ತ, ಗೋದಿ, ದ್ವಿದಳ ಧಾನ್ಯಗಳು ಮತ್ತು ಹೊಗೆಸೂಪ್ಪು ಮುಖ್ಯ ಬೆಳೆಗಳು. ಈ ಜಿಲ್ಲೆಯಲ್ಲಿರುವ ಹಳ್ಳಿಗಳ ಸಂಖ್ಯೆ 3,028. ಇವು ಸಾಮಾನ್ಯವಾಗಿ ದೊಡ್ಡವಾಗಿದ್ದು ಅಭಿವೃದ್ದಿ ಸ್ಥಿತಿಯಲ್ಲಿವೆ. ಇಲ್ಲಿನ ನವಪಾರದ ಕಾಡುಗಳಲ್ಲಿ  ಅನೇಕ ಉಪಯುಕ್ತ ಮರಗಳುಂಟು. ಜಿಲ್ಲೆಯಲ್ಲಿ ಮ್ಯಾಂಗನೀಸ್, ಗ್ರ್ರಾಫೈಟ್ ನಿಕ್ಷೇಪಗಳು ಹೇರಳವಾಗಿವೆ; ಅವನ್ನು ಹೆಚ್ಚಾಗಿ ಉಪಯಾೀಗಿಸಿಕೊಳ್ಳುತ್ತಿಲ್ಲ. ರಾಯ್‍ಪುರ-ವಿಜಯನಗರದ ರೈಲುಮಾರ್ಗ ಕಾಲಾಹಂಡಿ ಜಿಲ್ಲೆಯ ಉತ್ತರದಲ್ಲಿ ಹಾದು ಹೋಗುತ್ತದೆ. ಜಿಲ್ಲೆಯ ಆಡಳಿತಕೇಂದ್ರ ಭವಾನಿ ಪಟ್ಣ (14,300: 1961), ಹಿಂದಿನ ಸಂಸ್ಧಾನದ ಮಹಾರಾಜನ ಅರಮನೆ ಇಲ್ಲಿದೆ. ಈ ಜಿಲ್ಲೆಯಲ್ಲಿರುವ ಬೇಲ್ಖಂಡಿ ಪುರಾತತ್ವ ಪ್ರಾಮುಖ್ಯವುಳ್ಳ ಸ್ಥಳ. ಗುಡಹಂಡಿಯ ಗುಹೆಯಲ್ಲಿರುವ ಚಿತ್ರಗಳು ಇತಿಹಾಸಪೂರ್ವ ಕಾಲದವೆಂದು ಊಹಿಸಲಾಗಿದೆ. ಇವನ್ನು ಕೆಂಪು ಕಪ್ಪು ಬಣ್ಣಗಳಲ್ಲಿ ಬರೆಯಲಾಗಿದೆ.

 

(ಎಂ.ಎ.ಎಚ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ